Depression Epsiode- 1
ಖಿನ್ನತೆ ಕಾಡದವರು ಯಾರಿದ್ದಾರೆ. ಎಲ್ಲರೂ ಜೀವನದ ಒಂದಲ್ಲಾ ಒಂದು
ಘಟ್ಟದಲ್ಲಿ ಕುಸಿದು ಕುಳಿತವರೇ. ಬಿದ್ದು ಮೇಲೇಳಲಾಗದೇ ಸೋಲೊಪ್ಪಿಕೊಂಡವರನ್ನು ಬದಿಗಿಡೋಣ.
ಖಿನ್ನರಾಗಿ ಇನ್ನು ಸಾಧ್ಯವಿಲ್ಲ ಎಂದು ಕೈಚೆಲ್ಲಿದವರನ್ನು ಉಳಿಸುವುದು ಯಾವುದೋ ಮಾಯೆಯೇ
ಆಗಿರಬಹುದು. ಆ ಮಾಯೆ ಯಾವುದೇ ರೂಪದಲ್ಲಿರಬಹುದು. ಅಂತದ್ದೇ ಮಾಯೆಗಳಲ್ಲೊಂದು ಈ "Battle Symphony" ಎಂಬ ಹಾಡು.
Inspirational Songಗಳು pop ಸಂಗೀತದಲ್ಲಿ
ಸರ್ವೇಸಾಮನ್ಯವಾಗಿದ್ದರೂ, ಈ ಹಾಡಿನ ಸೌಂದರ್ಯವೇ ಬೇರೆ.
2017ರಲ್ಲಿ ಬಿತ್ತರಗೊಂಡ Linkin Park Bandನ "One More Light" ಎನ್ನುವ ಆಲ್ಬಮ್ಮಿನ ಹಾಡು ಇದು. Linkin Park ಡಿಸ್ಕೋಗ್ರಫ಼ಿಯಲ್ಲೇ
ಇದೊಂದು ವಿಶಿಷ್ಠವಾದ ಹಾಡು. ಹಾಡು ಪೂರ್ತಿಯಾಗಿ pop sound ನಿಂದ ದೂರವಾದಂತೆ
ಕಂಡರೂ ಒಂದು ನೂತನವಾದ ಭಾವನೆಯನ್ನು ಹುಟ್ಟಿಸುತ್ತದೆ. ಬಹಳಷ್ಟು ಹಾಡುಗಳು ಆಳವಾದ ಅರ್ಥವನ್ನು
ಕಟ್ಟಿಕೊಂಡಿರುವುದಿಲ್ಲ. ಆದರೆ ಇದು ಅಂತಹ ಸಂಗೀತವನ್ನು ಸ್ಪರ್ಧಿಸುವಂತಿದೆ. ಒಂದು ಸಕಾರಾತ್ಮಕ
ಸಂದೇಶ, ಆಳವಾದ ಭಾವನೆಗಳನ್ನು ಒಳಗೊಂಡಿರುವ ಇದು ಸೋಲನ್ನೇ ಸೋಲಿಸಲು ಹೊರಡೋಣ
ಎನ್ನುವಷ್ಟು ಸ್ಪೂರ್ತಿದಾಯಕವಾಗಿದೆ. ಹಾಡಿನ ಸ್ವರ, ಹಾಡುಗನ ಕಂಠ, ಹಿನ್ನೆಲೆ ಸಂಗೀತ
ಮತ್ತು chorus ಹಾಡಿನ ಭಾವವನ್ನು ಮತ್ತೂ ಹರಿತಗೊಳಿಸಿವೆ. Lyrics Video ಹಾಡಿನ ಚಂದವನ್ನು ಹೆಚ್ಚಿಸಿದೆ.
“I got a long way to go" ಎಂದು ಪ್ರಾರಂಭವಾಗುವ ಹಾಡು
ಭವಿಷ್ಯದ ಬಗ್ಗೆ ಇಡುವ ಆಶೆಯಾಗಿದೆ."if my armour
breaks" ಎನ್ನುವಾಗ ಹಾಡುಗಾರನ ಧ್ವನಿಯಲ್ಲಿ ಕಾಣುವ ರೋಧನೆ ಮತ್ತು "I’ll fuse it back together" ಎನ್ನುವಾಗಿನ ಆವೇಶ ಕೇಳುಗನ ಎದೆಯಲ್ಲಿ
ಸಂಕಟವನ್ನು ಹುಟ್ಟಿಸುತ್ತದೆ. "but the sound of your
voice puts the pain in reverse" ಎನ್ನುವ ಸಾಲುಗಳು ಬಹಳ ಆಪ್ತವೆನ್ನಿಸುತ್ತವೆ.
ಇಲ್ಲೊಂದು ವಿಶೇಷವೆಂದರೆ – ಹಾಡು ಎಲ್ಲ
ನೋವುಗಳನ್ನು ತೋಡಿಕೊಳ್ಳುತ್ತ ಆ ವೇದನೆಗಳನ್ನು ಉಪಶಮನಗೊಳಿಸುವ ಬಗೆಯನ್ನೂ ವಿವರಿಸುತ್ತದೆ.
ಹಾಡಿನ ಪ್ರತೀ ಸಾಲೂ ಇಷ್ಟವಾಗುವಂತಿದೆ; ‘battle symphony’ ಎನ್ನುವ ರೂಪಕ ಸಹ . ಕೇಳಿನೋಡಿ......
Battle Symphony (Official Lyric Video) - Linkin Park - YouTube