ಭಾನುವಾರ, ಜುಲೈ 3, 2011

೩೦-೦೧-೨೦೧೧

ನಾನೂ ಒ೦ಟಿಯಾಗಿರುತ್ತೇನೆ
ನೂರಾರು ಒಂಟಿ ಜೀವಗಳ ನಡುವೆ!
ನನ್ನಾತ್ಮ ನಿರತವಾಗಿರುತ್ತದೆ
ನೆಮ್ಮದಿಯ ಹಾದಿಯತ್ತ.

ನನ್ನ ಉಕ್ಕಿ ಬರುವ ನಗು ಬಚ್ಚಿಟ್ಟುಕೊಂಡಿದೆ;
ಈ ಆತ್ಮಕ್ಕಾದರೋ
ನೆಮ್ಮದಿ ಕಾಣುವ ಹಂಬಲ,
"ಹಿಗ್ಗಿ ನಗುವುದೇ ಸುಗ್ಗಿ" ಎಂಬುದನ್ನು ಅದು ಮರೆತಂತಿದೆ!!!

ಹರಿವ ಕಣ್ಣೀರಿಗೆ ಒಡ್ಡು ಬೇರೆ!
ಬಿಕ್ಕಲು ಬಿಡುವುದಿಲ್ಲ ಈ ಆತ್ಮ-
ಅದಕ್ಕೆ ಸೋಲುವ ಮನಸ್ಸಿಲ್ಲ;
ಹರಿಯದ ಕಣ್ಣೀರು ಬೆವರಾಗಿ ಸುರಿಯುತ್ತದೆ,
ನೋವಿನ ವಾಸನೆ
ನನ್ನೊಳಗೆ ಅಮರಿಕೊಂಡಿದೆ...............

ನಿರಂತರ ನೆಮ್ಮದಿಯ ಹಾದಿಯಲ್ಲಿ
ಮುನ್ನಡೆಯುತ್ತಿದೆ ನನ್ನಾತ್ಮ.
ತನ್ನ ನಿಜ ಅಸ್ತಿತ್ವವನ್ನೇ ಅದು ಮರೆತು
ನನ್ನಿಂದಲೇ ದೂರ ಓಡುತ್ತಿದೆ.

ಅದಕ್ಕೇನೂ ನನ್ನ ಪರಿವೆಯಿಲ್ಲ:
ಆದರೆ ನಾನಿನ್ನೂ ಅದರೊಡನಿದ್ದೇನೆ!!!!!!!


3 ಕಾಮೆಂಟ್‌ಗಳು:

  1. ನೂರಾರು ಒಂಟಿ ಜೀವಗಳ ನಡುವೆ - "ಹಿಗ್ಗಿ ನಗುವುದೇ ಸುಗ್ಗಿ..."
    ಆತ್ಮಕ್ಕೆ ನಗುವ ಕಲಿಸುವಂತ ಪ್ರಜ್ಞೆ ನಮ್ಮದಾಗಿಸಿಕೊಂಡರೆ ಬದುಕಿನ ಪ್ರತಿ ಘಳಿಗೆಯೂ ಸುಗ್ಗಿ ಸಂಭ್ರಮ...
    ಚಂದನೆಯ ಭಾವಗಳು...
    ಹೀಗೆ ಸಾಗಲಿ ಅಕ್ಷರ ಪಯಣ...

    ಪ್ರತ್ಯುತ್ತರಅಳಿಸಿ
  2. ಹರಿವ ಕಣ್ಣೀರಿಗೆ ಒಡ್ಡು ಬೇರೆ!
    ಬಿಕ್ಕಲು ಬಿಡುವುದಿಲ್ಲ ಈ ಆತ್ಮ-
    ಅದಕ್ಕೆ ಸೋಲುವ ಮನಸ್ಸಿಲ್ಲ;
    ಹರಿಯದ ಕಣ್ಣೀರು ಬೆವರಾಗಿ ಸುರಿಯುತ್ತದೆ,
    ನೋವಿನ ವಾಸನೆ
    ನನ್ನೊಳಗೆ ಅಮರಿಕೊಂಡಿದೆ...............
    :::
    ;;;
    ಚಂದದ ಸಾಲುಗಳು...
    ಹೀಗೇ ಬರೆಯುತ್ತಿರಿ...

    ಪ್ರತ್ಯುತ್ತರಅಳಿಸಿ